Actor Sudeep spoke about his old controversy with Shivarajkumar. Sudeep gives few clarifications about the differences he had with Dr. Raj Family. <br /> <br /> <br />ನಟ ಶಿವರಾಜ್ ಕುಮಾರ್ ಮತ್ತು ಸುದೀಪ್ ಈಗ ಒಟ್ಟಿಗೆ 'ದಿ ವಿಲನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗ ಅವರಿಬ್ಬರ ಮಧ್ಯೆ ಸ್ನೇಹ ಇದೆ. ಆದರೆ ಈ ಹಿಂದೆ ಶಿವಣ್ಣ ಮತ್ತು ಸುದೀಪ್ ನಡುವೆ ಅಷ್ಟಕಷ್ಟೆ ಎನ್ನುವ ಸುದ್ದಿ ಇತ್ತು. 'ರಾಜ್ ಕಪ್ ಕ್ರಿಕೆಟ್' ಸಮಯದಲ್ಲಿ ನಡೆದ ಘಟನೆಯ ನಂತರ ಶಿವಣ್ಣ ಸುದೀಪ್ ನಡುವೆ ಮನಸ್ತಾಪ ಇದೆ ಎಂಬ ಅನೇಕ ವದಂತಿ ಇತ್ತು. ಆದರೆ ಈಗ ಆ ವಿಷಯದ ಬಗ್ಗೆ ಮತ್ತೆ ಸುದೀಪ್ ಮಾತನಾಡಿದ್ದಾರೆ. ಪತ್ರಕರ್ತ ಹಾಗೂ ಲೇಖಕ ಜೋಗಿ ಬರೆದಿರುವ 'ನಾನು ಪಾರ್ವತಿ' ಎಂಬ ಹೊಸ ಪುಸ್ತಕ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ಅವರ ಬಗ್ಗೆ ಬರೆದ ಪುಸ್ತಕ ಇದಾಗಿದ್ದು, ಈ ಕಾರ್ಯಕ್ರಮಕ್ಕೆ ಸುದೀಪ್ ಅತಿಥಿ ಆಗಿದ್ದರು. ಈ ವೇಳೆ ಪುಸ್ತಕದ ಬಗ್ಗೆ ಮಾತು ಶುರು ಮಾಡಿದ ಸುದೀಪ್ ''ನಾನು ಓಪನ್ ಆಗಿ ಮಾತಾಡ್ಲಾ'' ಎಂದು ಅನೇಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. <br />